ಪ್ರಿಯಾಂಕ ತಿಮ್ಮೇಶ್ ಒಬ್ಬ ಭಾರತೀಯ ಚಲನಚಿತ್ರ ನಟಿ. ಅವರು ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ . ಅವರು ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ.ಅವರು ೨೦೧೫ ರಲ್ಲಿ ಕನ್ನಡ ಚಿತ್ರ "ಗಣಪ" ದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. == ಆರಂಭಿಕ ಜೀವನ == ಪ್ರಿಯಾಂಕಾ ಕರ್ನಾಟಕದ ಭದ್ರಾವತಿಯಲ್ಲಿ ತಿಮ್ಮೇಶ್ ಮತ್ತು ಗಿರಿಜಾ ದಂಪತಿಗಳಿಗೆ ಜನಿಸಿದರು. ಆಕೆಗೆ ಒಬ್ಬ ಹಿರಿಯ ಸಹೋದರನಿದ್ದಾನೆ. ಪ್ರಿಯಾಂಕಾ ಅವರು ಭದ್ರಾವತಿಯ ಸೇಂಟ್ ಚಾರ್ಲ್ಸ್ ಹೈಸ್ಕೂಲಿನಲ್ಲಿ ಶಾಲಾಶಿಕ್ಷಣವನ್ನು ಮತ್ತು ಶಿವಮೊಗ್ಗದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾವನ್ನೂ ಪಡೆದರು. == ವೃತ್ತಿ == ಪ್ರಿಯಾಂಕ ಅವರು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಪ್ರೀತಿಯಿಂದ" ಧಾರಾವಾಹಿಯಲ್ಲಿ ಕಾಶ್ಮೀರಿ ಹುಡುಗಿ "ಗುಲಾಬಿ" ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟರು. ತಮ್ಮ ಮೊದಲ ಚಿತ್ರವಾದ "ಗಣಪ" ದಲ್ಲಿ ಅವರು "ಬೃಂದಾ" ಪಾತ್ರದಲ್ಲಿ ಕಾಣಿಸಿಕೊಂಡರು. ಅವರು ಅಕಿರಾ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಅದರ ನಂತರ ಪಟಾಕಿ ಯಲ್ಲಿ ಗಣೇಶ್ ಮತ್ತು ಉತ್ಪಲ್ ಕುಮಾರ್ ಜೊತೆಗೆ "ಜಾನ್ ಸೇನ/ಸೀನ" ಚಿತ್ರದಲ್ಲಿ ಅಭಿನಯಿಸಿದರು. ಇದನ್ನು ಸಿಂಪಲ್ ಸುನಿ ನಿರ್ದೇಶನ ಮಾಡಿದ್ದರು. ಕಾರ್ತಿಕ್ ಸರಗೂರು ನಿರ್ದೇಶನದ ಮುಂಬರುವ "ಭೀಮಸೇನ ನಳ ಮಹಾರಾಜ" ಚಿತ್ರದಲ್ಲಿ ಪ್ರಿಯಾಂಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತುಇದನ್ನು ಪುಷ್ಕರ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದಾರೆ. ರೋಷನ್ ಆಂಡ್ರ್ಯೂಸ್ ನಿರ್ದೇಶನದ ನಿವಿನ್ ಪೌಲಿಯ ನಾಯಕತ್ವದ ಮಲಯಾಳಂ ಚಿತ್ರ ಕಾಯಂಕುಳಂ ಕೊಚ್ಚುನ್ನಿ ನಲ್ಲಿ ಪ್ರಿಯಾಂಕಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. == ಪ್ರಿಯಾಂಕ ಅವರ ಚಲನಚಿತ್ರಗಳು == == ಪ್ರಿಯಾಂಕ ಅವರ ಅಭಿನಯದ ಧಾರಾವಾಹಿಗಳು ಮತ್ತು ಶೋಗಳು == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಪ್ರಿಯಾಂಕ ತಿಮ್ಮೇಶ್ ಐ ಎಮ್ ಡಿ ಬಿನಲ್ಲಿ